ಕನ್ನಡಿಗರ ವ್ಯಾಪಾರ
ವೇದಿಕೆಯನ್ನು 2024 ರ ನವೆಂಬರ್
1 ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಶ್ರೀ ಶರತ್ ಖಾದ್ರಿ ಅವರು ಸ್ಥಾಪಿಸಿದರು.
ಕರ್ನಾಟಕದ ಶ್ರೇಷ್ಠ ಸಾಹಿತ್ಯ ಪ್ರತಿಮೆಗಳನ್ನು ಹೊಂದಿರುವ ಕುಟುಂಬಕ್ಕೆ ಸೇರಿದವರು, ಶ್ರೀ ಶರತ್ ಖಾದ್ರಿ ಅವರು ಪದ್ಮಶ್ರೀ
ಪ್ರಶಸ್ತಿ ಪುರಸ್ಕೃತ ಕವಿ ಶ್ರೀ ಪು.ತಿ.ನಾ ಅವರ ಮೊಮ್ಮಗ ಮತ್ತು ಮತ್ತು ಅವರ ದೊಡಪ್ಪ, ಶ್ರೀ ಖಾದ್ರಿ ಶಾಮಣ್ಣ ಅವರು,
ಸ್ವಾತಂತ್ರ್ಯ ಹೋರಾಟಗಾರರು ಮತ್ತು “ಕನ್ನಡ ಪ್ರಭ” ದ ಮಾಜಿ ಮುಖ್ಯ ಸಂಪಾದಕರಾಗಿದ್ದರು. ಅವರ ತಂದೆ, ಶ್ರೀ ಖಾದ್ರಿ ಎಸ್
ಅಚ್ಯುತನ್ ಅವರನ್ನು, ಮಾಧ್ಯಮ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಳಿಗಾಗಿ, ಕರ್ನಾಟಕ
ರಾಜ್ಯೋತ್ಸವ
ಪ್ರಶಸ್ತಿ (ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ) ನೀಡಿ ಗೌರವಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ ನಂತರ, ಶ್ರೀ ಶರತ್ ತಮ್ಮ ಕುಟುಂಬದ ಪರಂಪರೆಯನ್ನು ಅನುಸರಿಸಲು ಮತ್ತು ಕನ್ನಡ ಭಾಷೆಗೆ
ಏನಾದರೂ ಕೊಡುಗೆ ನೀಡಲು ನಿರ್ಧರಿಸಿದರು. ಕನ್ನಡ ಮಾತನಾಡುವ ವ್ಯಾಪಾರ ಮಾಲೀಕರನ್ನು ರಚನಾತ್ಮಕ ರೀತಿಯಲ್ಲಿ ಒಟ್ಟುಗೂಡಿಸುವ ಮೂಲಕ
ಅವರಿಗೆ ಸಹಾಯ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅರಿತುಕೊಂಡರು.
ಅವರು ಆಟಮ್ ಲೀವ್ಸ್ ಎಂಬ ಹೆಸರಿನ ಹಲವಾರು ಪ್ರಿಸ್ಕೂಲ್ ಕೇಂದ್ರಗಳನ್ನು ಹೊಂದಿದ್ದಾರೆ , ಅಲ್ಲಿ ಅವರು 2 ವರ್ಷ
ವಯಸ್ಸಿನಿಂದಲೇ
ಮಕ್ಕಳಿಗೆ ಕನ್ನಡ ಕಲಿಸುವುದನ್ನು ಕಲಿಸುತಿದ್ದಾರೆ.
Kannadigara Vyaapaara Vedike was
founded by
Mr. Sharat Khadri on the occasion of Karnataka Rajyotsava on 1st November, 2024.
Mr. Sharat Khadri belongs to the family with great literary icons of Karnataka. He is the grandson of
Padmashree awardee poet Shri Pu.Ti.Na and nephew of freedom fighter and Ex Chief Editor of
Kannada
Prabha, Shri Khadri Shamanna. His father, Shri Khadri S Achyuthan was honoured with Karnataka
Rajyotsava
award (highest civilian award given by the Govt of Karnataka) for his immense contributions in
the field
of Media & Journalism.
After working in various parts of the country, Mr. Sharat decided to follow the legacy of his family and
do something to contribute towards the language Kannada. He realized that the need of the hour was to
help the Kannada speaking Business owners by bringing them together in a structured way.
He also owns a chain of Preschool by name Autumn Leaves where he has ensured Kannada is taught
from the
young age of 2 years.